ಮಂಚವೊಂದರಲ್ಲಿ ಕಂಚುಕಿ ಸಹ ಮೂರ್ತವ ಮಾಡಿದ್ದಾನೆ.
ಆ ಮೂರ್ತಿಯ ಹಂಚುಹಂಚಿನಲ್ಲಿ ಕಂಚುಕಿಯಾಗಿದ್ದಾನೆ.
ಆ ಮಂಚ, ಈ ಹಂಚು ಕಂಚುಕಿಯ[ರ]ರಿಯಬಲ್ಲಡೆ,
ಸಂಚಿತತ್ರಯ ಒಡಕ ಹಂಚು ನೋಡಾ,
ಪ್ರಪಂಚಹರ ಪಂಚಮುಖ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Man̄cada kan̄cuki saha mūrtava māḍiddāne.
Ā mūrtiya han̄cuhan̄cinalli kan̄cukiyāgiddāne.
Ā man̄ca, ī han̄cu kan̄cukiya[ra]riyaballaḍe,
san̄citatraya oḍaka han̄cu nōḍā,
prapan̄cahara pan̄camukha kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ