ಬೀಜವೊಂದರಲ್ಲಿ ಸೋಜಿಗದ ಮೂರುತಿ
ಮಾಡುವ ಬುದ್ಧಿಯೊಳೈದಾನೆ ನೋಡವ್ವಾ.
ಬೀಜವ ನೋಡಿದಡೆ ತಾನು ಬೀಜ.
ಅದರಲ್ಲಿಯ ಸೋಜಿಗನು ತಾನು ಮಾಜುವ ಬುದ್ಧಿ
ತಾ ಎನಬಾರದು, ಮಾಯೆ ಎನಬಾರದು.
ಇವರೀರ್ವರಲ್ಲಿ ಜೂಜು ಇಟ್ಟು ಚಲಿಸುತ್ತದೆ ನೋಡವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬೆ ಮಹಾವಸ್ತುವವ್ವಾ.
Art
Manuscript
Music
Courtesy:
Transliteration
Bījadalli sōjigada mūruti
māḍuva bud'dhiyoḷaidāne nōḍavvā.
Bījava nōḍidaḍe tānu bīja.
Adaralliya sōjiganu tānu mājuva bud'dhi
tā enabāradu, māye enabāradu.
Ivarīrvaralli jūju iṭṭu calisuttade nōḍavvā,
kapilasid'dhamallikārjunanembe mahāvastuvavvā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ