Index   ವಚನ - 1880    Search  
 
ಕೋಟಿ ಕೋಟಿ ಜನ್ಮವ ತಾಳಿ ಕೋಟಲೆಗೊಳುವುದೇಕಯ್ಯಾ? ಕೋಟಿಯೊಳಗರ್ಧ, ಅರ್ಧದೊಳಗರ್ಧ ನಾಟಿಸಿದೆ. `ನಮಃ ಶಿವಾಯ' ಎಂದಡೆ, ಕೋಟಿ ಕೋಟಿ ನರಕಂಗಳನೀಡಾಡಿ, ಮಹಾದೇವಿಯರ ಮಂದಿರದ ಕೋಟೆಯನೇರಿಸಿತ್ತು. ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.