Index   ವಚನ - 1888    Search  
 
ಲಿಂಗದ ಅಂಗವದು ಅಳವಡದಿರೆ ಸಂಗವ ಮಾಡು ಪುರಾತರ, ಮನವೆ. ಕಂಗಳವರಿಯದಿರೆ ತಿಂಗಳಧರನ ಪೂಜಿಸು ಮನವೆ. ಲಿಂಗಾಂಗ ಸಮರಸವಾಗದಿರೆ ಗಂಗಾಧರ ಕಪಿಲಸಿದ್ಧಮಲ್ಲಿಕಾರ್ಜುನ ಎನ್ನು, ಮನವೆ.