ವಚನ - 1891     
 
ವ್ಯಾಕರಣವನೋದಿದಲ್ಲಿ ಶಬ್ದಶುದ್ಧಿಯಲ್ಲದೆ, ಮನ ಶುದ್ಧವಾಗಿ ಜ್ಞಾನಶುದ್ಧಿಯಾಗದು. ಛಂದಸ್ಸು ಸಾಧಿಸಿದಲ್ಲಿ ಕವಿತಾಶುದ್ಧಿಯಲ್ಲದೆ, ಕವಿತೆಯ ಸಾಧಿಸಿ, ವ್ಯಾಸನಂತೆ ಚಿರಂಜೀವಿಯಾಗನು. ಅಷ್ಟಾದಶಪುರಾಣವ ಸಾಧಿಸಿದಲ್ಲಿ ವಾಕ್ ಶುದ್ಧಿಯಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾದೇವಾ, ದೇಹಸ್ವಭಾವ ಶುದ್ದಿಯಾಗದು ನೋಡಾ, ಮಡಿವಾಳ ಮಾಚಯ್ಯಾ.