Index   ವಚನ - 1890    Search  
 
ಕಾದುವರೆ ಕೈಯೆರಡುಂಟೆ? ಬೇಡುವರೆ ಬಾಯಿ ಹರಿಯದುಂಟೆ? ಕಾದಬಾರದು ಬೇಡಬಾರದು, ಕೂಡುವ ಕಾಲಕ್ಕೆ ಕೂಡಲಿಡಬಾರದು ಕಾಣಾ, ಗುರು ಚೆನ್ನಬಸವಣ್ಣನಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಾ.