ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದುವು;
ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು;
ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು.
ಅಕ್ಷರದಲ್ಲಿಲ್ಲ, ಶಬ್ದದಲ್ಲಿಲ್ಲ, ಗ್ರಂಥಾನ್ವಯದಲ್ಲಿಲ್ಲ;
ಏನೆಂಬುದಿಲ್ಲ, ಮೊದಲೆ ಇಲ್ಲ.
ಇಲ್ಲೆಂಬುವ ಅಹುದೆಂಬುವ ಉಭಯ ಶಬ್ದಕ್ಕೆ ಲೋಪವಿಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ
ಮಹಾಮಹಿಮನು.
Art
Manuscript
Music
Courtesy:
Transliteration
Rēkhe rēkhe kūḍidare akṣaravādavu;
akṣarākṣara kūḍida śabdavāyittu;
śabda śabda kūḍidadalli granthānvayavāyittu.
Akṣaradalla, śabdadalla, granthānvayadalla;
ēnembudilla, modale illa.
Illembuva ahudembuva ubhaya śabdakke lōpavilla
nōḍā, kapilasid'dhamallikārjuna
mahāmahimanu.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ