ವಚನ - 1922     
 
ಮೇಲುಮಾಡಿದ ನುಡಿಯಂತೆ ನಡೆಯಬೇಹಡೆ, ಮೃಡಭಾವವಡಗಿರಬೇಕು. ಪ್ರಾಣದಲ್ಲಿ ಅಡಗಿದ ಭಾವ[ವ] ನಡಹಿಕೊಳಬೇಕಾದಡೆ, ದೃಢಲಿಂಗಮೂರ್ತಿಯ ಧರಿಸಬಹುದೆ ದೇಹದಲ್ಲಿ? ಅರಿದು ಧರಿಸದೆ, ಧರಿಸಿ ಅರಿಯದೆ ಇದ್ದವನ ಭಾವ ಬಯಲಲ್ಲಿಹ ದೀಪದಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.