•  
  •  
  •  
  •  
Index   ವಚನ - 1923    Search  
 
ವಸ್ತು ನಿರಾಕಾರವೆಂದಡೆ ಆಕಾರಕ್ಕೆ ಬರುವುದೆ? ವಸ್ತು ನಿರಾಕಾರವೆಂದಡೆ ವಿಕಾರಕ್ಕೆ ಬರುವುದೆ? ವಸ್ತು ಉಭಯವೆಂದಡೆ ಉಭಯ ಸಂದೇಹತ್ವದಿಂಬಳಿವುದೆ? ವಸ್ತುವಿನ ವ್ಯವಹಾರ ಆರಿಗೂ ಅರಿಯಬಾರದು. ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ಉಭಯಾತೀತ ನೋಡಾ, ಪ್ರಭುವೆ.
Transliteration Vastu nirākāravendaḍe ākārakke baruvude? Vastu nirākāravendaḍe vikārakke baruvude? Vastu ubhayavendaḍe ubhaya sandēhatvadimbaḷivude? Vastuvina vyavahāra ārigū ariyabāradu. Kapilasid'dhamallikārjunaliṅga ubhayātīta nōḍā, prabhuve.