ವಸ್ತು ನಿರಾಕಾರವೆಂದಡೆ ಆಕಾರಕ್ಕೆ ಬರುವುದೆ?
ವಸ್ತು ನಿರಾಕಾರವೆಂದಡೆ ವಿಕಾರಕ್ಕೆ ಬರುವುದೆ?
ವಸ್ತು ಉಭಯವೆಂದಡೆ ಉಭಯ ಸಂದೇಹತ್ವದಿಂಬಳಿವುದೆ?
ವಸ್ತುವಿನ ವ್ಯವಹಾರ ಆರಿಗೂ ಅರಿಯಬಾರದು.
ಕಪಿಲಸಿದ್ಧಮಲ್ಲಿಕಾರ್ಜುನಲಿಂಗ
ಉಭಯಾತೀತ ನೋಡಾ, ಪ್ರಭುವೆ.
Art
Manuscript
Music Courtesy:
Video
TransliterationVastu nirākāravendaḍe ākārakke baruvude?
Vastu nirākāravendaḍe vikārakke baruvude?
Vastu ubhayavendaḍe ubhaya sandēhatvadimbaḷivude?
Vastuvina vyavahāra ārigū ariyabāradu.
Kapilasid'dhamallikārjunaliṅga
ubhayātīta nōḍā, prabhuve.