ಮೇಲುಮಾಡಿದ ನುಡಿಯಂತೆ ನಡೆಯಬೇಹಡೆ,
ಮೃಡಭಾವವಡಗಿರಬೇಕು.
ಪ್ರಾಣದಲ್ಲಿ ಅಡಗಿದ ಭಾವ[ವ] ನಡಹಿಕೊಳಬೇಕಾದಡೆ,
ದೃಢಲಿಂಗಮೂರ್ತಿಯ ಧರಿಸಬಹುದೆ ದೇಹದಲ್ಲಿ?
ಅರಿದು ಧರಿಸದೆ, ಧರಿಸಿ ಅರಿಯದೆ ಇದ್ದವನ ಭಾವ
ಬಯಲಲ್ಲಿಹ ದೀಪದಂತೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mēlumāḍida nuḍiyante naḍeyabēku,
mr̥ḍabhāvavaḍagirabēku.
Prāṇadalli aḍagida bhāva[va] naḍahikoḷabēkādaḍe,
dr̥ḍhaliṅgamūrtiya dharisabahude?
Aridu dharisade, dharisi ariyade iddavana bhāva
bayalalliha dīpadante nōḍā,
kapilasid'dhamallikārjunā.