Index   ವಚನ - 1924    Search  
 
ತೋರುವ ಜಗತ್ತು ಬ್ರಹ್ಮವೆಂದೊಮ್ಮೆ ವಾದಿಸುವೆ. ತೋರುವ ಜಗತ್ತು ಮಾಯೆಯೆಂದೊಮ್ಮೆ ವಾದಿಸುವೆ. ತೋರಿಯಡಗಿದಲ್ಲಿ ಮಾಯೆ ಎನಿಸಿತ್ತು; ತೋರಿ ತೋರಿದಲ್ಲಿ ಬ್ರಹ್ಮವೆನಿಸಿತ್ತು. ತೋರಿದಲ್ಲಿ ತೋರಿ ಕೆಡದಲ್ಲಿ ಏನೆಂದೆನಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.