Index   ವಚನ - 1939    Search  
 
ಕರದಲ್ಲಿಯ ಅರುಹು ಕರಕರಿಸಿ ಬೆರಸಿದಂತಾದಡೆ, ಕರಕಂಜದ ಪರವಸ್ತು ತಾನೆ ನೋಡಾ. ಕರದಲ್ಲಿಯ ಅರುಹು ಕರದಂತಾಗಬಾರದಯ್ಯಾ. `ಕರಾಭ್ಯಾಂ ರಹಿತಸ್ಯ ಕುತಃ ಕರ್ಮ ಕುತ ಆನಂದಃ|' ಎಂಬುದು ಪ್ರಸಿದ್ಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.