Index   ವಚನ - 1944    Search  
 
ಬಸವನವ ಎರಡನೆಯ ಶಂಭುವೆನ್ನುವರು. ನಾವು ಮೂರನೆಯ ಶಂಭುವೇನಯ್ಯಾ? ತನ್ನ ತಾ ತಿಳಿದಲ್ಲಿ ಎರಡನೆಯ ಶಂಭುವೆನಿಸಿದ: ತನ್ನ ತಾ ಮರೆದಲ್ಲಿ ಮಹೀತಳದ ಮಾನವನೆನಿಸಿದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.