ವಚನ - 1947     
 
ಕಲ್ಲಿನಲ್ಲಿ ವಲ್ಲಭನಿದ್ದಾನೆಂದು ಅಲ್ಲಾಡುತ್ತಾರೆ ನೋಡಾ, ಅಲ್ಲಯ್ಯಾ, ಈ ಖುಲ್ಲಮನುಜರು. ಕಲ್ಲಿನಲ್ಲಿ ವಲ್ಲಭನ ಕಂಡೆವೆಂದು ಬಡಿದಾಡುತ್ತಾರೆ ನೋಡಾ, ಅಲ್ಲಯ್ಯಾ, ಈ ಹೊಲ್ಲಮನುಜರು. ಕಲ್ಲಿನಲ್ಲುಂಟು, ಮಣ್ಣಿನಲ್ಲಿಲ್ಲವೆಂದೆಂಬಡೆ, ಅಂತರ್ಯಾಮಿ ಪರಿಪೂರ್ಣತ್ವ ಭಂಗವಹುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.