ಹಸಿವುದೋರದ ಮುನ್ನ, ತೃಷೆದೋರದ ಮುನ್ನ,
ವ್ಯಾಧಿವಿಪತ್ತುಗಳು ಬಂದಡಸದ ಮುನ್ನ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ
ಪೂಜಿಸೋ ಮುನ್ನ ಮುನ್ನ!
Transliteration Hasivudōrada munna, tr̥ṣedōrada munna,
vyādhivipattugaḷu bandaḍasada munna,
kapilasid'dhamallikārjunaliṅgava
pūjisō munna munna!