ವಚನ - 1956     
 
ತನ್ನವರೆನ್ನಬಾರದು, ತನ್ನ ಬಂಧುಗಳೆನ್ನಬಾರದು; ತನಗನ್ಯರೆನ್ನಬಾರದು. ತಮ್ಮ ತಮ್ಮ ಮನಕ್ಕೆ ಮನವೆ ಸಾಕ್ಷಿ; ಮನಕ್ಕೆ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನನೆ ಸಾಕ್ಷಿ, ಬಿಲ್ಲೇಶಯ್ಯಾ.