•  
  •  
  •  
  •  
Index   ವಚನ - 1961    Search  
 
ಅಂತರಂಗದಲ್ಲಿಹ ಲಿಂಗ ಬಹಿರಂಗದಲ್ಲಿ ಲಿಂಗವಾಯಿತ್ತೆಂಬುದರಿಯೆ. ಬಹಿರಂಗದಲ್ಲಿಯ ಲಿಂಗ ಅಂತರಂಗದಲ್ಲಿ ಲೀಯವಾಗುವ ಕಾರಣವರಿಯೆ. ಅಂತರಂಗ ಬಹಿರಂಗವೆಂಬೆರಡರ ಸಂಗ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬುದರಿಯೆ; ಏನೆಂದರಿಯೆ.
Transliteration Antaraṅgadalliha liṅga bahiraṅgadalli liṅgavāyittembudariye. Bahiraṅgadalliya liṅga antaraṅgadalli līyavāguva kāraṇavariye. Antaraṅga bahiraṅgavemberaḍara saṅga kapilasid'dhamallikārjunayyanembudariye; ēnendariye.