ಎಲ್ಲರ ಮರೆಯಬಹುದು;
ಎನ್ನ ವಲ್ಲಭ ಗುರುಮೂರ್ತಿಯ ಮರೆಯಬಾರದು.
ಎಲ್ಲರ ಕೀರ್ತಿಸಬಹುದು;
ಎನ್ನ ಗುರುಮೂರ್ತಿಯ ಕೀರ್ತಿಸಬಾರದು.
ಎಲ್ಲರ ಹೋಗಲಾಡಿದರೆಂದು
ಎನ್ನ ನಲ್ಲನು ಹೋಗಲಾಡನು,
ನೀ ಹೋಗಲಾಡೆನೆ, ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ಪಾದಸಾಕ್ಷಿಯಾಗಿ.
Transliteration Ellara mareyabahudu;
enna vallabha gurumūrtiya mareyabāradu.
Ellara kīrtisabahudu;
enna gurumūrtiya kīrtisabāradu.
Ellarū hōgalāḍidaru
enna nallanu hōgalāḍanu,
nī hōgalāḍene, kapilasid'dhamallikārjunā,
nim'ma pādasākṣiyāgi.