Index   ವಚನ - 13    Search  
 
ತನುವೀವಡೆ ತನುವೆನಗಿಲ್ಲ, ಮನವೀವಡೆ ಮನವೆನಗಿಲ್ಲ, ಧನವೀವಡೆ ಧನವೆನಗಿಲ್ಲ. ಇಂತೀ ತನುಮನಧನ ಸಕಲಸಂಪತ್ತುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದುತಂದು ಎನ್ನೊಡಲ ಹೊರೆವೆನಲ್ಲದೆ ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ.