Index   ವಚನ - 16    Search  
 
ನರನ ಮುಟ್ಟಿ ಓಲೈಸಿದಲ್ಲಿ ಪರಿಪರಿಯ ಪದವಿಗಳುಂಟು. ಪರಶಿವಮೂರ್ತಿಯನರಿದಲ್ಲಿ ಇಹಪರದಲ್ಲಿ ಪರಮಸುಖವುಂಟು. ಇದೇ ಪರತತ್ವದ ಇರವು. ಅಮರೇಶ್ವರಲಿಂಗವ ಬೆರಸಬಲ್ಲಡೆ ಇದೇ ಸುಖ.