Index   ವಚನ - 4    Search  
 
ರತ್ನಭಂಡಾರ ಮುತ್ತು ವಸ್ತ್ರದ ಪೆಟ್ಟಿಗೆಯಲ್ಲಿ ಬಾಹ್ಯವಸ್ತು ತಾವಪ್ಪವೆ? ಬೈಕೆಯ ದೃಷ್ಟವಲ್ಲದೆ ಗುಣವಸ್ತು ಗುಣವೊಳಗಿಲ್ಲದಿರೆ, ಬಿದಿರು ಮರ ಲೋಹ ಮುಂತಾದ ಇದಿರಿಟ್ಟ ಕರಂಡಕೆಲ್ಲಕ್ಕೂ ಒಳಗಣ ಗುಣವಸ್ತು ಇಲ್ಲದಿರೆ, ಆತ್ಮನೆಯ್ದಿದ ಘಟದಂತಿಪ್ಪವು. ಆ ಗುಣವಸ್ತು ವಸ್ತುಕದ ಲಕ್ಷದ ನಿರ್ಲಕ್ಷವ ತಿಳಿದು, ತಾನೇನ ಹಿಡಿದು ಧರಿಸಿದಲ್ಲಿಯೂ ಅವು ತಾನಲ್ಲ, ಅವರೊಳು ತಾನಿಲ್ಲ. ಆ ಗುಣ ಮನಭ್ರಾಂತಿಯಲ್ಲದೆ ಲೀಲೋಲ್ಲಾಸತೆ, ಆ ವಿವರ ಗುಣಭಾವವಳಿದು, ಆ ವಸ್ತು ನಿನಗನ್ಯಭಿನ್ನವಲ್ಲ. ತಿಳಿದಡೆ ಕರಂಡದೊಳಗಡಗಿದ, ಅಡಗಿಸಿಕೊಂಡ ಬಾಹ್ಯಗುಣ ವಸ್ತುವಿನಂತಹೆ, ಗೋಳಕಾಕಾರ ವಿಶ್ವವಿರಹಿತಲಿಂಗವನರಿದ ಉಭಯಸಂಗದ ಗುಣ.