Index   ವಚನ - 4    Search  
 
ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು. ಎನ್ನ ಸುಂಕ ಎಲ್ಲರ ಪರಿಯಲ್ಲ. ಕಟ್ಟಿದ ಕುರುಹಿಂಗೆ, ಹಿಡಿದ ವ್ರತನೇಮನಿತ್ಯಕ್ಕೆ ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ. ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ ಎಂದು ಕೊಟ್ಟ ಚೀಟು ವಿಶುದ್ಧಿ, ಜಗದ ಸುಂಕದೊಡೆಯ ಬಂಕೇಶ್ವರಲಿಂಗನು.