ಹುಲಿ ಹುತ್ತ ಕಳ್ಳರ ಹಾದಿ, ಬಲುಗೈಯರ ತೆಕ್ಕೆ,
ಇದು ಬಲವಂತತನದಿಂದ ಆಗದು,
ಅವರವರ ಒಲವರದಿಂದಲ್ಲದೆ.
ಗೆಲುವ ಮನ, ಸೋಲುವ ಕಾಯ,
ಈ ಉಭಯದ ಒಲವರದಿರವು,
ಶರೀರದ ಸುಂಕ, ಬಂಕೇಶ್ವರಲಿಂಗಕ್ಕೆ.
Art
Manuscript
Music
Courtesy:
Transliteration
Huli hutta kaḷḷara hādi, balugaiyara tekke,
idu balavantatanadinda āgadu,
avaravara olavaradindallade.
Geluva mana, sōluva kāya,
ī ubhayada olavaradiravu,
śarīrada suṅka, baṅkēśvaraliṅgakke.