Index   ವಚನ - 25    Search  
 
ಆಸೆಯೆಂಬ ಕತ್ತೆಯ ಮೇಲೆ ಪೂಸತನವೆಂಬ ಸೆಟ್ಟಿವೇಷ, ವೇಷಲಾಂಛನದ ಚಿತ್ತವಾಸದ ಪಾಶವನೆತ್ತಿ, ಈಶನರಿಯದ ಸೆಟ್ಟಿ ವಿಷಕ್ಕಾಗಿ ಕೈಯಾಂತು, ತನ್ನ ಬೆವಹಾರಕ್ಕೆ ನಷ್ಟಬಂದಿತ್ತು. ಬಂಕೇಶ್ವರಲಿಂಗಕ್ಕೆ ಲಾಭವಾಯಿತ್ತು.