Index   ವಚನ - 31    Search  
 
ಮಹಿಮಾಪದದಲ್ಲಿ ಒಂದು ಮನೋಹರದ ಪಟ್ಟಣ. ಪಟ್ಟಣದ ಸುತ್ತುವಳೆಯದಲ್ಲಿ ಇಕ್ಕಿದ ಕೋಟೆ. ರಸಮಂದಿರದ ಮಣ್ಣು, ನಿರಂಜನದ ಅಗಳು. ತತ್ವಾರ್ಥದ ಆಳುವೇರಿ, ಮಂಡೆಗೆಮರೆ ತೆನೆ. ಮುಕ್ತಿ ನಿಶ್ಚಯವಾದ ಪೃಥ್ವಿಪಟ. ಅದರೊಳಗಾದ ಎಂಬತ್ತನಾಲ್ಕು ಲಕ್ಷ ಮನೆಯಲ್ಲಿ ಹೊಂದುವರೊಬ್ಬರೂ ಇಲ್ಲ. ಪಟ್ಟಣ ಆರಿಗೂ ಸಾಧ್ಯವಲ್ಲ, ಬಂಕೇಶ್ವರಲಿಂಗವನರಿತವರಿಗಲ್ಲದೆ.