ಸುಧೆಯ ಸುಮ್ಮಾನದ ಗಿರಿಯಲ್ಲಿ ಒಂದು
ಮಲಯಜದ ಮರ ಹುಟ್ಟಿತ್ತು.
ಬೇರಿಲ್ಲದೆ ನೀರಿಲ್ಲದೆ ಭೂಮಿಯೊಳಗಲ್ಲದೆ
ಬೆಳೆವುತ್ತದೆ ನೋಡಾ.
ಅದಕ್ಕೆ ಬೇರಿನೊಳಗಣ ಹಣ್ಣು,
ಮರದ ಮಧ್ಯದಲ್ಲಿ ಕಾಯಿ, ತುದಿಯಲ್ಲಿ ಹೂ.
ತುದಿಯಲ್ಲಿ ಕುಸುಮ ಬಲಿದು,
ಮರದ ಮಧ್ಯದಲ್ಲಿ ಕಾಯಿ ಬಲಿದು,
ರಸ ಬೇರಿಗಿಳಿಯಿತ್ತು.
ಬೇರಿನ ಹಣ್ಣು ಬಂಕೇಶ್ವರಲಿಂಗಕ್ಕೆ
ಆರೋಗಣೆಯಾಯಿತ್ತು.