Index   ವಚನ - 55    Search  
 
ಹುಳ್ಳಿ ಹಳ್ಳದಲ್ಲಿ ಹೋಗುತ್ತಿರೆ, ನೀರು ತಾಗಿ ಅಲ್ಲಾಡದಿಹುದೆ? ಸಂಸಾರಸಾಗರಮಧ್ಯದಲ್ಲಿ ವಾಸವಾಗಿದ್ದ ಆತ್ಮ, ಸಂಸಾರದ ಪಾಶ ತಾಗಿ ಓಸರಿಸದಿಹುದೆ? ರಸತಾಗಿದ ರಸ ಪಾವಕಂಗೆ ಹುಸಿಯಾದಂತೆ, ಅಸು ಘಟಯೋಗ ಅದರ ದೆಸೆಯಂತೆ ಇರಬೇಕು, ಹುಸಿ ದಿಟದಂತಿರಬೇಕು, ಬಂಕೇಶ್ವರಲಿಂಗವನರಿವುದಕ್ಕೆ.