ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ,
ಮೆಲುವರಿಗೆ ಅಡಹೆ ?
ಹೊರಗೊಣಗಿ, ಒಳಗೆ ಫಳ ರಸಭರಿತವಾಗಿ,
ಭುಂಜಿಸುವರ ಅಂಗ ಮನೋಹರವಾಗಿಪ್ಪುದು.
ಲೌಕಿಕ ಪರಮಾರ್ಥಂಗಳ ಭೇದ,
ಉಭಯರೂಪು ನಿಬದ್ಧಿಯಾದಲ್ಲಿ,
ಬಂಕೇಶ್ವರಲಿಂಗವು ಎಂತಿದ್ದಡೇನು?
Art
Manuscript
Music
Courtesy:
Transliteration
Phaḷa oḷage koḷetu, horage īḍādaḍe,
meluvarige aḍahe?
Horagoṇagi, oḷage phaḷa rasabharitavāgi,
bhun̄jisuvara aṅga manōharavāgippudu.
Laukika paramārthaṅgaḷa bhēda,
ubhayarūpu nibad'dhiyādalli,
baṅkēśvaraliṅgavu entiddaḍēnu?
ಸ್ಥಲ -
ಸರ್ವಭಾವಲೇಪ ಸಂಬಂಧಸ್ಥಲ: