ಆಚಾರ ಕ್ರೀ ಸನ್ನದ್ಧವಾಗಿ ನಿಂದಲ್ಲಿ, ಅದು ಅರಿವಿನ ಘನ,
ವಿರಕ್ತಿಯ ಒಡಲು, ಸರ್ವ ಅರ್ಪಿತ,
ಅವಧಾನದ ಚಿತ್ತದ ಕೈ, ಉಭಯಪರಿಪೂರ್ಣದೃಷ್ಟಿ.
ಸತ್ಪಥದ ಸಿಕ್ಕಿಲ್ಲದ ಮಾರ್ಗ,
ಅದು ಉಭಯ ಕೇವಲಜ್ಞಾನ,
ದಂಪತಿ ಸಂಬಂಧಲೇಪ,
ಬಂಕೇಶ್ವರಲಿಂಗದಲ್ಲಿ ಉಭಯಸ್ಥಲ ಅಳವಟ್ಟ ಶರಣಂಗೆ.
Art
Manuscript
Music
Courtesy:
Transliteration
Ācāra krī sannad'dhavāgi nindalli, adu arivina ghana,
viraktiya oḍalu, sarva arpita,
avadhānada cittada kai, ubhayaparipūrṇadr̥ṣṭi.
Satpathada sikkillada mārga,
adu ubhaya kēvalajñāna,
dampati sambandhalēpa,
baṅkēśvaraliṅgadalli ubhayasthala aḷavaṭṭa śaraṇaṅge.
ಸ್ಥಲ -
ಸರ್ವಭಾವಲೇಪ ಸಂಬಂಧಸ್ಥಲ: