Index   ವಚನ - 70    Search  
 
ಇದಿರಗುಣ ಸಂಪಾದಿಸುವಲ್ಲಿಯೆ ತನ್ನಯ ಮರವೆ. ಇದಿರೆಡೆಗೆ ತಾನಲ್ಲದೆ, ತನಗೆ ಇದಿರೆಡೆಯಿಲ್ಲದೆ, ಉಭಯಕ್ಕೆ ಒಡಲಿಲ್ಲದೆ, ತನ್ನ ಕ್ರೋಧವೆ ಇದಿರಿಂಗೆ ರೂಪು, ತನ್ನ ಸುಚಿತ್ತವೆ ಇದಿರಿಂಗೆ ಸಮಾಧಾನ. ಇಂತೀ ಭಾವವನರಿ, ಬಂಕೇಶ್ವರಲಿಂಗದಲ್ಲಿ.