ನಿಜ ನಿಶ್ಚಯವಾದಲ್ಲಿ ಚಿಲುಮೆ ಜಲ, ಸಕಲರುಚಿ,
ವಿಚ್ಛಂದವಾಗಿ ಬಯಕೆಯ ಬಿಟ್ಟುದೆ ಲವಣನಾಸ್ತಿ.
ಸರ್ವಕರಣೇಂದ್ರಿಯಂಗಳ ಸಂಸರ್ಗಕ್ಕೆ
ಮನವನೀಯದಿದ್ದುದೆ ಭವಿ ವಿರೋಧ.
ಉಚಿತ ತತ್ಕಾಲಂಗಳಲ್ಲಿ ಅಪ್ಯಾಯನವರಿತು ವಿಶ್ರಮಿಸೂದೆ ಕೃತ್ಯದ ಕಟ್ಟಣೆ.
ಮನಬಂದಂತೆ ನುಡಿದು, ತನುಬಂದಂತೆ ಆಡಿ,
ನಿಂದಿಹ ಸ್ಥಿತಿಯ ತಾನಾಡಿ, ಹಲಬರ ಕೈಯಲ್ಲಿ ಕೇಳಿ,
ಇಂತೀ ಗುಣಕ್ಕೆ ಒಪ್ಪಿ,
ಭಕ್ತನೆಂಬ ಕೃತ್ಯದ ಮತ್ತರನೊಪ್ಪ ಬಂಕೇಶ್ವರಲಿಂಗ.
Art
Manuscript
Music
Courtesy:
Transliteration
Nija niścayavādalli cilume jala, sakalaruci,
vicchandavāgi bayakeya biṭṭude lavaṇanāsti.
Sarvakaraṇēndriyaṅgaḷa sansargakke
manavanīyadiddude bhavi virōdha.
Ucita tatkālaṅgaḷalli apyāyanavaritu viśramisūde kr̥tyada kaṭṭaṇe.
Manabandante nuḍidu, tanubandante āḍi,
nindiha sthitiya tānāḍi, halabara kaiyalli kēḷi,
intī guṇakke oppi,
bhaktanemba kr̥tyada mattaranoppa baṅkēśvaraliṅga.
ಸ್ಥಲ -
ಅರಿವುಭಾವಸ್ಥಲಪೂರಿತ: