ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು.
ಸೂಜಿಯ ಮೊನೆ ಹಳೆಯ ಅರಿವೆಯ ಚುಚ್ಚಲಾರದು.
ಹಿನ್ನಿ ಹಿಡದ ಭೇದವ ನೋಡಾ !
ಮೊನೆ ಗೆಲ್ಲದು ಹಿನ್ನಿಯ ಭಾರಕ್ಕಂಜಿ.
ಹಿನ್ನಿಯ ನನ್ನಿಯ ಮಾಡಿ, ಚೆನ್ನಾಗಿ ಚುಚ್ಚಲಾಗಿ,
ಹಿನ್ನಿ ಕಿತ್ತು ಮೊನೆ ಹೋಯಿತ್ತು.
ಹಚ್ಚಡ ಎಣೆಗೂಡಿತ್ತು, ಬಂಕೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
Sūjiya hinniyalli mugila tōrada dāra hiḍiyittu.
Sūjiya mone haḷeya ariveya cuccalāradu.
Hinni hiḍada bhēdava nōḍā!
Mone gelladu hinniya bhārakkan̄ji.
Hinniya nanniya māḍi, cennāgi cuccalāgi,
hinni kittu mone hōyittu.
Haccaḍa eṇegūḍittu, baṅkēśvaraliṅgadalli.
ಸ್ಥಲ -
ಕ್ರಿಯಾಸಂಬಂಧ ಲೇಪಸ್ಥಲ: