ಬಸವಣ್ಣನೆ ಗುರುಮೂರ್ತಿಯಾಗಿ
ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ
ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ
ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ
ಎನ್ನ ಕರಸ್ಥಲಕ್ಕೆ ಬಂದರಯ್ಯಾ.
ಪ್ರಭುದೇವರೆ ಜ್ಞಾನಮೂರ್ತಿಯಾಗಿ
ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು,
ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು,
ಸರ್ವತೋಮುಖವಾಗಿ.
ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ.
ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ,
ತ್ರಿಕಾಲದಲ್ಲಿಯೂ ನಿಮ್ಮ ಶರಣರ
ಶ್ರೀಪಾದವ ನೆನೆವುತಿರ್ದೆನಯ್ಯಾ,
ವೀರಬಂಕೇಶ್ವರಾ.
Art
Manuscript
Music
Courtesy:
Transliteration
Basavaṇṇane gurumūrtiyāgi
enna karasthalakke bandanayyā.
Cennabasavaṇṇane liṅgamūrtiyāgi
enna karasthalakke bandanayyā.
Sid'dharāmayyane jaṅgamamūrtiyāgi
enna karasthalakke bandanayyā.
Maruḷaśaṅkaradēvare prasādamūrtiyāgi
enna karasthalakke bandarayyā.
Prabhudēvare jñānamūrtiyāgi
enna hr̥dayasthalakke bandarayyā.
Ivaru mukhyavāda ēḷnūreppattamaragaṇaṅgaḷu,
Enna sarvāṅgadalli mūrtigoṇḍaru,
sarvatōmukhavāgi.
Āhā enna puṇyave, āhā enna bhāgyave,
āhā enna satyave, āhā enna nityave.
Haraharā, śivaśivā mahādēvā mahādēvā,
trikāladalliyū nim'ma śaraṇara
śrīpādava nenevutirdenayyā,
vīrabaṅkēśvarā.
ಸ್ಥಲ -
ಕ್ರಿಯಾಸಂಬಂಧ ಲೇಪಸ್ಥಲ: