Index   ವಚನ - 6    Search  
 
ಮೂರು ಗಳಿಗೆಯನೊಂದುಗೂಡಿ, ಹೊರೆಯಲ್ಲಿ ಐದು ಕತ್ತರಿಸಲಾಗಿ, ಆರು ಹೋಳಾಯಿತ್ತು. ಆರಕ್ಕೆ ಮೂರ ಪ್ರತಿಯನಿಕ್ಕಲಾಗಿ, ಸೂಜಿಯ ಮೊನೆಯ ಕೊನೆಯಲ್ಲಿ ಆರಡಗಿ ಮೂರೊಡಗೂಡಿದವು. ಮೀರಿ ಹೊಲಿವುದಕ್ಕೆ ಒಡಗೂಡುವ ಹೋಳ ಕಾಣೆ. ಇಂತೀ ಗುಣವಡಗಿದ ಮತ್ತೆ, ಷಡುಸ್ಥಲ ತ್ರಿವಿಧಕೂಟ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನದೇವರಲ್ಲಿಯೆ ಒಡಗೂಟ.