ಬ್ರಹ್ಮಂಗಂಟುದಾರ, ವಿಷ್ಣುವಿಂಗೆ ಉಭಯದ ಹೊಲಿಗೆ,
ರುದ್ರಂಗೆ ಟಿಬ್ಬಿ, ಮಿಕ್ಕಾದ ದೇವಕುಲಕ್ಕೆಲ್ಲಕ್ಕೂ
ಅಲ್ಲಲ್ಲಿಗೆ ಕಲ್ಲಿಯ ಹೊಲಿಗೆ.
ಈ ಗುಣವ ಬಲ್ಲವರೆಲ್ಲರೂ
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವರಹರು.
Art
Manuscript
Music
Courtesy:
Transliteration
Brahmaṅgaṇṭudāra, viṣṇuviṅge ubhayada holige,
rudraṅge ṭibbi, mikkāda dēvakulakkellakkū
allallige kalliya holige.
Ī guṇava ballavarellarū
prasanna kapilasid'dha mallikārjunaliṅgava ballavaraharu.