ಷಡಾಧಾರದಲ್ಲಿ ಅಡಿಗದಿ ಹೋಹವರ ಕಂಡೆ.
ತತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋಹವರ ಕಂಡೆ.
ಮಾತಿನ ಬ್ರಹ್ಮವನಾಡಿ ವಸ್ತುವನರಿಯದೆ,
ಭ್ರಾಂತರಾಗಿ ಕೆಟ್ಟವರ ಕಂಡೆ.
ಅಷ್ಟಾಂಗಯೋಗವನರಿತೆಹೆವೆಂದು
ಘಟ ಕೆಟ್ಟು ನಷ್ಟವಾದವರ ಕಂಡೆ.
ಇಂತಿವನರಿದು ಕರ್ಮಯೋಗವ ಮಾಡದೆ,
ವರ್ಮಂಗಳನರಿದು ಸರ್ವಗುಣಸಂಪನ್ನನಾಗಿ,
ತನ್ನ ತಾನರಿದ ಮತ್ತೆ ಮಹಾತ್ಮಂಗೆ,
ತನಗೆ ಏನೂ ಅನ್ಯಭಿನ್ನವಿಲ್ಲ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವು ತಾನಾದವಂಗೆ.
Art
Manuscript
Music
Courtesy:
Transliteration
Ṣaḍādhāradalli aḍigadi hōhavara kaṇḍe.
Tatvaṅgaḷa gotta hēḷi muṭṭade hōhavara kaṇḍe.
Mātina brahmavanāḍi vastuvanariyade,
bhrāntarāgi keṭṭavara kaṇḍe.
Aṣṭāṅgayōgavanaritehevendu
ghaṭa keṭṭu naṣṭavādavara kaṇḍe.
Intivanaridu karmayōgava māḍade,
varmaṅgaḷanaridu sarvaguṇasampannanāgi,
tanna tānarida matte mahātmaṅge,
tanage ēnū an'yabhinnavilla,
prasanna kapilasid'dha mallikārjunaliṅgavu tānādavaṅge.