ಸ್ಥೂಲಕ್ಕೆ ಮೂರು, ಸೂಕ್ಷ್ಮಕ್ಕೆ ಎರಡು,
ಕಾರಣಕ್ಕೆ ಒಂದೆಂದು ತಿಳಿದ ಮತ್ತೆ,
ನಾನಾ ಸಂದುಸಂದ ಹೊಲಿಯಲೇತಕ್ಕೆ?
ನಾ ಗಳಿಗೆಯಲೊಡಗೂಡಿದಡದು ಮುಗಿದು ಮತ್ತೆ,
ಎರಡು ಹೊರೆಯಾಯಿತ್ತು.
ಎರಡು ಹೊರೆಯ ಹೊಲಿಗೆಯನರಿದ
ಮತ್ತೆ, ಹೋದವ ತಾನೇಕವಾದ ಮತ್ತೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವನು
ಒಡಗೂಡುವನ ಇರವು.
Art
Manuscript
Music
Courtesy:
Transliteration
Sthūlakke mūru, sūkṣmakke eraḍu,
kāraṇakke ondendu tiḷida matte,
nānā sandusanda holiyalētakke?
Nā gaḷigeyaloḍagūḍidaḍadu mugidu matte,
eraḍu horeyāyittu.
Eraḍu horeya holigeyanarida
matte, hōdava tānēkavāda matte,
prasanna kapilasid'dha mallikārjunaliṅgavanu
oḍagūḍuvana iravu.