Index   ವಚನ - 9    Search  
 
ಸ್ಥೂಲಕ್ಕೆ ಮೂರು, ಸೂಕ್ಷ್ಮಕ್ಕೆ ಎರಡು, ಕಾರಣಕ್ಕೆ ಒಂದೆಂದು ತಿಳಿದ ಮತ್ತೆ, ನಾನಾ ಸಂದುಸಂದ ಹೊಲಿಯಲೇತಕ್ಕೆ? ನಾ ಗಳಿಗೆಯಲೊಡಗೂಡಿದಡದು ಮುಗಿದು ಮತ್ತೆ, ಎರಡು ಹೊರೆಯಾಯಿತ್ತು. ಎರಡು ಹೊರೆಯ ಹೊಲಿಗೆಯನರಿದ ಮತ್ತೆ, ಹೋದವ ತಾನೇಕವಾದ ಮತ್ತೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವನು ಒಡಗೂಡುವನ ಇರವು.