Index   ವಚನ - 4    Search  
 
ಅಟ್ಟಿ ಹಾವುತಲೊಮ್ಮೆ, ಹೋಗಿ ನಿಲುತಲೊಮ್ಮೆ, ಬೀಗಿ ನಗುತಲೊಮ್ಮೆ, ಮರುಳಿನಂತೆ, ಮಂಕಿನಂತೆ ದೆಸೆದೆಸೆಯ ನೋಡುತ್ತ, ಅಂಗಡಿ ರಾಜಬೀದಿಯ ಶೃಂಗಾರಂಗಳ ನಲಿನಲಿದು ನೋಡುತ್ತ, ಇತ್ತರದ ಭದ್ರದ ಮೇಲೆ ನಾಟ್ಯವನಾಡುವವರ ನೋಡಿ ನಗುತ್ತ, ನೋಡುವ ಗಾವಳಿಯ ಜನರನಟ್ಟಿ ಹೊಯಿವಂತೆ ಹರಿವುತ್ತ, ಗುದಿಯಿಕ್ಕಿದಂತೆ ನಿಂದಿರೆ ಬೀಳುತ್ತ, ನಾಟ್ಯವನಾಡುವವವರಿಗೆ ಇದಿರಾಗಿ, ತಾ ಮರಳಿಯಾಡುತ್ತ, ಹಾಡುತ್ತ ಬೈವುತ್ತ ಕೆರಳಿ ನುಡಿವುತ್ತ, ವಾದ್ಯ ಮೇಳಾಪವ ಕಂಡು ಆಳಿಗೊಂಡು ನಗುತ್ತ, ಹಸ್ತವನಾಡಿಸಿ ಗತಿಯ ಮಚ್ಚರಿಸಿ ಕೈಯೊಡನೆ ಮರುಳಾಟವನಾಡುತ್ತ, ಮೆಲ್ಲಮೆಲ್ಲನೆ ನಿಂದು ನೋಡಿ ನಡೆವುತ್ತ, ಎಂದಿನ ಸುಳುಹಿನೊಳಗಲ್ಲದ ಸುಳುಹು, ಬಸವಣ್ಣ ನಿಮ್ಮಾಣೆ, ಸೊಡ್ಡಳನಾಗದೆ ಮಾಣನು.