Index   ವಚನ - 6    Search  
 
ಅಣ್ಣ ನೆಂಬಣ್ಣಗಳಣ್ಣಿ ಸೂದೈ ಹೊನ್ನು. ಅಣ್ಣಗಳ ಹೆಂಡಿರನಣ್ಣಿ ಸೂದೈ ಹೆಣ್ಣು. ಅಣ್ಣನೆಂಬಣ್ಣಗಳನಣ್ಣಿ ಸೂದೈ ಮಣ್ಣು. ಹೊನ್ನ ಕಂಡ ಬಳಿಕ ಅಣ್ಣದಣ್ಣಗಳುಂಟೆ? ಹೆಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೆ? ಮಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೆ? ಹೆಣ್ಣು ಹಿರಣ್ಯ ಭೂಮಿಯೆಂಬ ಹುಡಿಯ ಜಗದ ಕಣ್ಣಲ್ಲಿ ಹೊಯ್ದು, ನಿಮ್ಮ ನೆನೆವುದಕ್ಕೆ ತೆರಹುಗುಡದಿದೆಯಲ್ಲಾ, ಮುಕ್ಕಣ್ಣ ಸೊಡ್ಡಳ ಗರಳಧರಾ.