ಕಾಲಾಂತ್ಯಕಾಲದಲ್ಲಿ, ಪ್ರಳಯಾಂತ್ಯಪ್ರಳಯದಲ್ಲಿ,
ಕಾಲ ಮಹಾಕಾಲನಂ ಕೊಂದು, ಹರನು ಲೀಲೆಯನಾಡುವಲ್ಲಿ,
ತ್ರಿವಿಕ್ರಮನ ನಿಟ್ಟೆಲುವು ಕಟ್ಟಿಗೆ ವಾಸುಗಿ ತೆಗೆ ನೇಣು,
ನರಸಿಂಹನು ಗುರುಕೊಂಕಿ ಆದಿವರಾಹನ ಎಲೆಯಮಾಡಿ.
ಅದೆಂತೆಂದಡೆ:
ಕಲ್ಪಾಂತೇಶಮಿತತ್ರಿವಿಕ್ರಮ ಮಹಾಕಂಕಾಳ ಬದ್ಧಸ್ಫುರ |
ಚೈಷಃ ಸೂತ್ರಮಥೋ ನೃಸಿಂಹ ನಖಪ್ರೋತಾದಿಕೋಲಾಮಿಷಂ |
ವಿಶ್ವೈಕಾರ್ಣವ ಸಂವಿಹಾರಮುದಿತೌ ಯೌಮತ್ಸ್ಯ ಕೂರ್ಮೌ
ವುಚೌಕರ್ಷನಿವರತಾಂಗತಃ ಶ್ಯಾತು ಸತಾಂ ಮೋಹಂ ಮಹಾಭೈರವಃ ||
ಎಂದುದಾಗಿ, ಇಂತಪ್ಪ ಮತ್ಸ್ಯ ಕೂರ್ಮಂಗಳಂ ತೆಗೆದಾಡುವಂದು,
ಹರಿಹರನೆಂಬ ಹೆಸರಾಯಿತ್ತಯ್ಯಾ ಸೊಡ್ಡಳಾ.
Art
Manuscript
Music
Courtesy:
Transliteration
Kālāntyakāladalli, praḷayāntyapraḷayadalli,
kāla mahākālanaṁ kondu, haranu līleyanāḍuvalli,
trivikramana niṭṭeluvu kaṭṭige vāsugi tege nēṇu,
narasinhanu gurukoṅki ādivarāhana eleyamāḍi.
Adentendaḍe:
Kalpāntēśamitatrivikrama mahākaṅkāḷa bad'dhasphura |
caiṣaḥ sūtramathō nr̥sinha nakhaprōtādikōlāmiṣaṁ |
viśvaikārṇava sanvihāramuditau yaumatsya kūrmau
vucaukarṣanivaratāṅgataḥ śyātu satāṁ mōhaṁ mahābhairavaḥ ||
endudāgi, intappa matsya kūrmaṅgaḷaṁ tegedāḍuvandu,
hariharanemba hesarāyittayyā soḍḍaḷā.