ಕೆಮ್ಮ ಕೆಮ್ಮನೆ ಕೇಳಯ್ಯ.
ಬ್ರಹ್ಮಾಂಡವ ಬೆರಣಿಯ ಮಾಡಿ,
ಅಯ್ಯಾ ಕಾಲಕರ್ಮವೆಂಬ ಯುಗಜುಗಂಗಳನೆಲ್ಲವ
ಬಣ್ಣಿಗದೆನೆಯಂ ಮಾಡಿ, ಅವ ಹುರಿವನು,
ಒರಸುವನು, ಮುಕ್ಕುವನು.
ಅದೆಂತೆಂದಡೆ:
`ಈಶಃ ಸರ್ವಸ್ಯ ಜಗತಃ ಪ್ರೇರಕೋ ವಿಶ್ವಭುತ್ ಪ್ರಭುಃ'
ಇತೆಂದುದು ಶ್ರುತಿ.
ಸರ್ವಜಗಂಗಳ ಪುಟ್ಟಿಸುವ, ರಕ್ಷಿಸುವ, ಭಕ್ಷಿಸುವ
ತನ್ನಿಚ್ಛೆಗಾರ ಸೊಡ್ಡಳದೇವನು.
Art
Manuscript
Music
Courtesy:
Transliteration
Kem'ma kem'mane kēḷayya.
Brahmāṇḍava beraṇiya māḍi,
ayyā kālakarmavemba yugajugaṅgaḷanellava
baṇṇigadeneyaṁ māḍi, ava hurivanu,
orasuvanu, mukkuvanu.
Adentendaḍe:
`Īśaḥ sarvasya jagataḥ prērakō viśvabhut prabhuḥ'
itendudu śruti.
Sarvajagaṅgaḷa puṭṭisuva, rakṣisuva, bhakṣisuva
tannicchegāra soḍḍaḷadēvanu.