Index   ವಚನ - 31    Search  
 
ಕೂರ್ಮನ ಶಿಶುವಿನ ಸ್ನೇಹದಂತಿರ್ಪ ದೇವನೆನಗಿಂದು ಪ್ರತ್ಯಕ್ಷ ಕಣ್ಣ ಮುಂದೆ ಗೋಚರವಾದ ನೋಡಾ. ಎನ್ನ ಅಂತರಂಗದಲ್ಲಿ ಹೂಣೆಹೊಕ್ಕು, ವಿನಯ ಸದ್ಗೋಷ್ಠಿಯ ಮಾಡುವ ನಿಷ್ಕಳಂಕ ಚೈತನ್ಯನು ಸಕಲರೂಪ ಸನ್ನಹಿತವಾದ ನೋಡಾ. ಬಟ್ಟಬಯಲು ಬಲಿದು ಗಟ್ಟಿಗೊಂಡಂತೆ, ಏಕಾಂತವೀರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರ ನಿಲವು.