Index   ವಚನ - 36    Search  
 
ಘುಡುಘುಡಿಸಿ ಅನ್ಯದೈವಂಗಳ ಕೊಡೆವಿಡಿಸಿದನು. ಪಿಂಬೇರ ಮೈಲಿಗೆಯನು ಅಡಗಿಸಿದ ಭೋ. ದೈವಂಗಳ ದರ್ಪವನು ಉಡುಗಿಸಿದ ಭೋ. ಮುದನೂರ ದಾಸನ ತವನಿಧಿಯನು ಉರಿಗಣ್ಣ ಬಿಟ್ಟೊಮ್ಮೆ, ಹರಿಯ ಪ್ರತಿಮೆಯನೊಡೆದಡಗಿಸಿದ ಭೋ. ದೈವಂಗಳ ದರ್ಪವನು ಮನ್ನಣೆಯ ಮಾಡದೆ, ಮಾರಿಯ ಕೈಯ ಮೊರಡಿಯ ಧಾನ್ಯಂಗಳ ಮಿಡಿಸಿದನು. ಓಂ ನಮಃ ಶಿವಾಯ ಶಂಕರದಾಸ, ಪಂಚವದನ ಸೊಡ್ಡಳಾ.