ಚಂದ್ರಬಲ ತಾರಾಬಲವೆಂಬಿರಿ ಎಲೆ ಅಣ್ಣಗಳಿರಾ !
ಚಂದ್ರಂಗೆ ಯಾರ ಬಲ ? ಇಂದ್ರಂಗೆ ಯಾರ ಬಲ ?
ಇಂದ್ರಂಗೆ, ಮುಕುಂದಂಗೆ, ಬ್ರಹ್ಮಂಗೆ,
ಚಂದ್ರಶೇಖರ ದೇವಸೊಡ್ಡಳನ ಬಲವು, ಕೇಳಿರಣ್ಣಾ.
Art
Manuscript
Music
Courtesy:
Transliteration
Candrabala tārābalavembiri ele aṇṇagaḷirā!
Candraṅge yāra bala? Indraṅge yāra bala?
Indraṅge, mukundaṅge, brahmaṅge,
candraśēkhara dēvasoḍḍaḷana balavu, kēḷiraṇṇā.