Index   ವಚನ - 39    Search  
 
ಜವನಿದ್ದಾನೆ, ಜವನ ಪಟ್ಟಣವಿದೆ, ಮಾಮರನಿದೆ, ಹೂಮರನಿದೆ, ತೋಮರನಿದೆ ನೋಡಯ್ಯಾ. ಆವ ಕಾರ್ಯವಾದಡೂ ಮಾಡು, ದೇವ ಕಾರ್ಯವ ಮಾಡು. ಸಾವ ಕಾರ್ಯ ತಪ್ಪದು, ನೀ ಕೆಡಬೇಡ ಕಂಡಾ. ಬೇಗಬೇಗ ನಂಬಿ ಪೂಜಿಸು, ದೇವ ಸೊಡ್ಡಳನ, ಮರುಳೆ.