Index   ವಚನ - 38    Search  
 
ಜಡೆಯೆಡೆಯಾಯಿತ್ತು, ಬೋಳೆಡೆಯಾಯಿತ್ತು, ಲೋಚೆಡೆಯಾಯಿತ್ತು. ನಡೆಯ ಮುನ್ನಿನ, ನುಡಿಯ ಮುನ್ನಿನ ಒಡಲಗುಣಂಗಳಾರಿಗೂ ಬಿಡವು. ಎಡೆಯಣ ತಪವೇಕೆ ? ಬಡಸಂಸಾರ ಸಾಲದೇ, ಸೊಡ್ಡಳದೇವಾ ?