Index   ವಚನ - 40    Search  
 
ತನುವಿಕಾರ, ಮನವಿಕಾರ, ಜನನಮರಣಸ್ಥಿತಿ ಕಾರಣ, ಹೊನ್ನ ತೋರಿದೆ, ಜಗದ ಕಣ್ಣ ಮೊದಲಿಗೆ. ಹೆಣ್ಣ ಸುಳಿಸಿದೆ, ಜಗದ ಕಣ್ಣ ಮೊದಲಿಗೆ. ಮಣ್ಣ ಹರಹಿದೆ, ಜಗದ ಕಣ್ಣ ಮೊದಲಿಗೆ. ತನುವ ತಪ್ಪಿಸಿ, ಜಗವ ಸಂಸಾರಕ್ಕೊಪ್ಪಿಸಿ, ನುಣ್ಣನೆ ಹೋದನುಪಾಯದಿ ದೇವರಾಯ ಸೊಡ್ಡಳ.