Index   ವಚನ - 55    Search  
 
ಪಡೆದ ಕಾಣಿಭೋ ಕಾಲನಂ ಸಂಹರಿಸಿ, ಕಾಲಹರನೆಂಬ ನಾಮವ. ಪಡೆದ ಕಾಣಿಭೋ ಕಾಮನಂ ಸಂಹರಿಸಿ, ತ್ರಿಪುರಹರನೆಂಬ ನಾಮವ. ಪಡೆದ ಕಾಣಿಭೋಮತ್ಸ್ಯಕಶ್ಯಪನರಸಿಂಹಾದಿಗಳ ಸಂಹರಿಸಿ, ವೀರಭದ್ರನೆಂಬ, ಪೆಸರ. `ಸರ್ವಂ ವಿಷ್ಣುಮಯಂ ಜಗತ್' ಎಂಬ ಶ್ರುತಿಯ ಮತದಿಂ, ತೋರ್ಪ ಸಮಸ್ತ ಜಗತ್ತನು ಉರಿಗಣ್ಣ ಬಿಟ್ಟು ಸುಟ್ಟು, ಹರಿಹರನೆಂಬ ಪೆಸರ ಪಡೆದ ಕಾಣಿಭೋ. ಹರನು ಹರಿಯನು ಕೊಂದನೆಂದು ಸಲೆ ಸಾರುತ್ತಿದೆ ಯಜುರ್ವೇದ. ಓಂ ಹರಿಹರಂತಂ ಮನುಮಾತಿಂ ದೇವಾಃ | ವಿಶ್ವಸ್ಯಶಾನಂ ವೃಷಭಂ ಮತಿನಾಂ || ಇಂತೆಂದುದಾಗಿ, ಕಾಲಹರ ಕರ್ಮಹರ ತ್ರಿಪುರಹರ, ದುರಿತಹರ ಮಖಹರ ಹರಿಹರ ಸಕಲಹರ ಶರಣು ಸೊಡ್ಡಳಾ.